ಉಡುಪಿ: ಪೂರ್ಣ ಪ್ರಜ್ಞಾ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಸೌಮ್ಯ.ಲೋಕೆಶ್. ಶೆಟ್ಟಿ ಹಾಗೂ ಡಾ. ಜಿ.ಶಂಕರ್ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಉಮೇಶ್ ಮಯ್ಯ ಅವರು ಜೊತೆಗೂಡಿ ಬರೆದ ತೃತೀಯ ಸೆಮಿಸ್ಟರ್ ತರಗತಿಯ ಕಾಸ್ಟ್ ಅ್ಯಂಡ್ ಮ್ಯಾನೇಜ್ಮೆಂಟ್ ಅಕೌಂಟಿಕ್ ಪುಸ್ತಕವನ್ನು ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯ ತೀರ್ಥರು
ಬುಧವಾರ ಉಡುಪಿ ಪೂರ್ಣ ಪ್ರಜ್ಞಾ ಕಾಲೇಜಿನ ಮಿನಿ ಆಡಿಟೋರಿಯಂ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು.
ನಂತರ ಮಾತನಾಡಿದ ಯತಿವರ್ಯರು ತನ್ನ ಕಾಲೇಜಿನ ಪ್ರತಿಭಾನಿತ್ವ ಪ್ರಾಧ್ಯಾಪಕರಲ್ಲಿ ಒಬ್ಬರಾಗಿರುವ ಸೌಮ್ಯ ಶೆಟ್ಟಿಯವರು ಬರೆದ ಮೊದಲ ಪುಸ್ತಕಕ್ಕೆ ಶುಭ ಹಾರೈಸಿ, ಇನ್ನಷ್ಟು ಪುಸ್ತಕಗಳನ್ನು ಬರೆಯುವಂತಾಗಲಿ ಎಂದು ಶುಭ ಹಾರೈಸಿದರು.
ಬಳಿಕ ಮಾತನಾಡಿದ ಕಾಲೇಜಿನ ಖಂಜಾಜಿ ಪ್ರದೀಪ್ ಕುಮಾರ್ ಪುಸ್ತಕವನ್ನು ಬರೆಯುವುದು ಸುಲಭದ ಮಾತಲ್ಲ, ಆಳವಾದ ಅಧ್ಯಯನ ಹಾಗೂ ಪ್ರಖರವಾದ ಆಲೋಚನೆಗಳಿಂದ ಮಾತ್ರ ಪುಸ್ತಕ ಬರೆಯಲು ಸಾಧ್ಯ ಅದು ಸೌಮ್ಯ ಅವರಲ್ಲಿದೆ ಅವರಿಗೆ ಶುಭವಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೂರ್ಣ ಪ್ರಜ್ಞಾ ಕಾಲೇಜಿನ ಪ್ರಾಂಶುಪಾಲರು ಡಾ.ರಾಘವೇಂದ್ರ, ಡಾ.ಜಿ.ಶಂಕರ್ ಕಾಲೇಜಿನ ಪ್ರಾಧ್ಯಾಪಕ ಡಾ.ಉಮೇಶ್ ಮಯ್ಯ ಹಾಗೂ ಪಿಪಿಸಿಯ ಉಪ ಪ್ರಾಂಶುಪಾಲರು ಡಾ.ಪ್ರಕಾಶ್ ರಾವ್ ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು.
ಮಾತನಾಡಿದ ಅಧ್ಯಾಪಕಿ ಸೌಮ್ಯ ಶೆಟ್ಟಿಯವರು ನನಗೆ ಈ ಪುಸ್ತಕವನ್ನು ಬರೆಯಲು ನನ್ನ ಗುರುಗಳಾದ ಡಾ.ಉಮೇಶ್ ಮಯ್ಯ ಅವರು ಅವಕಾಶವನ್ನು ನೀಡಿದ್ದಾರೆ. ಹಾಗೂ ನನ್ನ ಕುಟುಂಬದವರು, ಸ್ನೇಹಿತರು ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ, ಸಹ ಅಧ್ಯಾಪಕರು ತುಂಬಾ ಬೆಂಬಲ ನೀಡಿದ್ದಾರೆ ಅವರೆಲ್ಲರಿಗೂ ಧನ್ಯವಾದಗಳು ಎಂದು ನುಡಿದರು
ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಜ್ಯೋತಿ ಆಚಾರ್ಯ ಸ್ವಾಗತಿಸಿ, ಸೌಮ್ಯ.ಎಲ್. ಶೆಟ್ಟಿ ವಂದಿಸಿದರು. ಮೀನಾಕ್ಷಿ ಆಚಾರ್ಯ ನಿರೂಪಿಸಿದರು.
No comments:
Post a Comment